ಚೇಳ್ಳಗುರ್ಕಿ ಗ್ರಾಮದ ಶ್ರೀ ಗುರು ಎರ್ರಿಸ್ವಾಮಿಗಳು ಕರ್ನಾಟಕ ಹಾಗು ಆಂಧ್ರ ಗಡಿ ಭಾಗದಲ್ಲಿ ಧಾರ್ಮಿಕ ಸಾಮರಸ್ಯವನ್ನು ಉಂಟು ಮಾಡಿ ಮಾನವೀಯ ಮತ್ತು ಜೀವನ ಮೌಲ್ಯವನ್ನು ಸಾರಿದ ಶಿವಯೋಗಿ. ಇವರ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿ ಭಕ್ತರ ಉದ್ಧಾರ ಮಾಡಿದ ಮಹಾ ಗುರು. ಇಂದಿಗೂ ಜೀವ ಸಮಾಧಿಯಲ್ಲಿ ನೆಲಸಿ ಭಕ್ತರ ಮನೋ ಕಾಮನೆಗಳನ್ನು ಪೂರೈಸುತ್ತಿದ್ದಾರೆ. ಇಂಥ ಮಹಾ ಮಹಿಮರ ಸಾಂಗತ್ಯ ಬೆಂಗಳೂರಿನ ಭಕ್ತರಿಗೂ ಸಿಗಲಿ ಎಂದು ಗುರುವಿನ ಅನುಗ್ರಹವಾಗಿ, ೧೯೯೦ ರಲ್ಲಿ ಸಂಪಂಗಿರಾಮ ನಗರದಲ್ಲಿ ಆಶ್ರಮದ ಸ್ಥಾಪನೆ ಆಯಿತು. ಅಂದಿನಿಂದ ಇಂದಿನವರೆಗೆ ಅನೇಕ ಧಾರ್ಮಿಕ ಕಾರ್ಯಗಳಲ್ಲಿ ಶ್ರೀ ಎರ್ರಿಸ್ವಾಮಿ ಆಶ್ರಮ ಟ್ರಸ್ಟ್ ತಮ್ಮನ್ನು ತೊಡಗಿಸಿ ಕೊಂಡಿದೆ.
೧೦೩ನೆ ವಾರ್ಷಿಕ ಆರಾಧನೆಯನ್ನು ೨೫ನೆ ತಾರೀಖು ೨೦೨೫ ರಂದು ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ೮ ಗಂಟೆಗೆ ರುದ್ರಾಭಿಷೇಕ, ೧೦ ಗಂಟೆಗೆ ಗುರುಗಳ ರಥೋತ್ಸವ ಹಾಗು ಮದ್ಯಾನ್ಹ ೧೨ ಗಂಟೆಗೆ ಮಹಾ ಪ್ರಸಾದ ಇರುತ್ತದೆ. ಭಕ್ತಾದಿಗಳು ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಗುರುಗಳ ಆಶೀರ್ವಾದ ಪಡೆಯಬೇಕೆಂದು ಕೋರಿಕೆ.
ಚೇಳ್ಳಗುರ್ಕಿಯಲ್ಲಿ ನಡೆಯುವಂತೆ ಬೆಂಗಳೂರಿನ ಆಶ್ರಮದಲ್ಲಿ ಕೂಡ ಪ್ರತಿತಿಂಗಳು ವಿಶೇಷ ಅಮಾವಾಸ್ಯೆ ಪೂಜೆ ಹಮ್ಮಿ ಕೊಳ್ಳಲಾಗುತ್ತದೆ. ಅಂದು ಸ್ವಾಮಿಗಳಿಗೆ ಹೂವಿನ ಅಲಂಕಾರ ಹಾಗು ಮಂಗಳಾರತಿಯೊಂದಿಗೆ ದಾಸೋಹದ ವ್ಯವಸ್ಥೆ ಇರುತ್ತದೆ. ದಾಸೋಹದ ಸೇವಾಕರ್ತರು ಇಚ್ಛಿಸಿದಲ್ಲಿ ಟ್ರಸ್ಟ್ ನ ಕಾರ್ಯದರ್ಶಿಗಳನ್ನು ಸಂಪರಕಿಸಬೇಕಾಗಿ ವಿನಂತಿ
ಶ್ರೀ ಶಿವಯೋಗಿ ಏರ್ರಿಸ್ವಾಮಿ ಮಂದಿರದ ಮಾಹಿತಿಗಾಗಿ ತಾತನ ಹಿತೈಷಿ ಮತ್ತು ಭಕ್ತಾದಿಗಳನ್ನು ಈ ಗ್ರೂಪ್ ಗೆ ಸೇರಿಸಲು ಗ್ರೂಪ್ ಗೆ ಶೇರ್ ಮಾಡಿ